Monday 23 April 2012

ಬಸವಕಲ್ಯಾಣಃ  ಡಾ. ಬಾಬಾ ಸಾಹೇಬ ಅಂಬೇಡ್ಕರ್್ ಅವರು ಕೊಟ್ಟಂಥ ಮೀಸಲಾತಿ ಜನಸಾಮಾನ್ಯರು ಸದುಪಯೋಗ ಪಡಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಸಂವಿಧಾನ ಶಿಲ್ಪಿಯ ವಿಚಾರ ತತ್ವಗಳು ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ಜಯಂತ್ಯೋತ್ಸವ ಆಚರಣೆಗಳಿಗೆ ಮಹತ್ವವನ್ನು ಬರುತ್ತದೆ ಎಂದು ಸಹಾಯಕ ಆಯುಕ್ತ ಎಚ್. ಪ್ರಸನ್ನಕುಮಾರ್ ಕರೆ ನೀಡಿದರು.

ನಗರದ ಹಳೇ ತಹಸೀಲ್ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಬೇಬ ಅಂಬೇಡ್ಕರ್್ ಅವರ 121 ನೇ ಜಯಂತ್ಯೋತ್ಸವದ ನಿಮಿತ್ಯ ನಗರದ ಕೋಟೆಯಿಂದ ತಹಸೀಲ್್ ಕಚೇರಿ ವರೆಗಿನ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ವಗ೯ಗಳ ಜನರ ಆಶ್ರಯದಾತರಾಗಿ ನ್ಯಾಯ, ಸಮಾನತೆ, ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟ ಅಂಬೇಡ್ಕರ್್ ಅವರು, ಯಾವುದೇ ಒಂದು ಜಾತಿ ಧಮ೯ಕ್ಕೆ ಸೀಮಿತರಲ್ಲ. ಎಲ್ಲಾ ಜಾತಿ ಜನಾಂಗದವರು ಅಪ್ಪಿಕೊಳ್ಳುವ ಸಾಮಾಜಿಕ ಚಿಂತನೆಗಳು ಅವರಲ್ಲಿದ್ದವು. ಹಿಂದುಳಿದವರ ಏಳ್ಗೆಗಾಗಿ ಶ್ರಮಿಸಿದ ಮಹಾನ್ ಪುರುಷರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್್ ಅವರ ವಿಚಾರಗಳಲ್ಲಿ ಕೆಳವಗ೯ದ ಜನರನ್ನು ಮೇಲೆತ್ತುವ ಕಾಯ೯ ಮಹತ್ವದ್ದಾಗಿತ್ತು. ಸಾಮಾಜಿಕವಾಗಿ ಸತತವಾಗಿ ದುಡಿದ ಮಹಾನ್್ ಚೇತನಗಳ ಆದಶ೯ಗಳು ನಮ್ಮ ಬದುಕಿಗೆ ಮಾಗ೯ದಶ೯ನವಾಗಿವೆ ಎಂದು ಅಭಿಪ್ರಾಯಪಟ್ಟರು.

ಬೌದ್ಧ ಸಮಾಜದ ಮಿಲಿಂದ ಗುರೂಜಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಡಾ. ಬಿ.ಆರ್್. ಅಂಬೇಡ್ಕರ್್ ಅವರ ಜೀವನ ಸಾಧನೆ, ಬದುಕಿನ ಮಾಗ೯ಗಳ ಕುರಿತು ವಿಶ್ಲೇಷಿಸಿದರು. ಪುಣ್ಯ ಪುರುಷರ ಜಯಂತಿ ಆಚರಣೆಗಳ ಮೂಲಕ ಕೆಟ್ಟ ವಿಚಾರಗಳು ಬಿಡಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ತಹಸೀಲ್ದಾರ್್ ಶಿವರಾಜ ಹಲಬಗೆ೯, ನಗರ ಯೋಜನಾ ಪ್ರಾಧಿಕಾರದ ರವಿ ಚಂದನಕೇರೆ, ನಗರ ಸಭೆ ಉಪಾಧ್ಯಕ್ಷ ಪಾಶಾಮಿಯ್ಯಾ ರಹೆಮಾನಸಾಬ್, ತಾ.ಪಂ, ಉಪಾಧ್ಯಕ್ಷೆ ಗೀತಾ ಅಂಬಾದಾಸ, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ತಾ.ಪಂ, ಅಧ್ಯಕ್ಷ ಗುರುಲಿಂಗಪ್ಪಾ ಸೈದಾಪೂರೆ, ಎಪಿಎಂಸಿ ಅಧ್ಯಕ್ಷ ಪ್ರಕಾಶ ಮೆಂಡೋಳೆ ಉಪಸ್ಥಿತರಿದ್ದರು.

ಎಸ್್.ಜಿ.ಹುಡೇದ ಕಾಯ೯ಕ್ರಮ ನಿರೂಪಿಸಿದರು. ಸಂಜು ಕಾಂಗೆ ವಂದಿಸಿದರು. ಕಾಯ೯ಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ನಗರದ ಪ್ರಮುಖ ಬೀದಿಯಿಂದ ಡಾ. ಬಿ.ಆರ್್. ಅಂಬೇಡ್ಕರ್್ ಅವರ ಭಾವಚಿತ್ರದ ಮೆರವಣಿಗೆ ಜರುಗಿತು. ಪ್ರಮುಖರಾದ ಅಜು೯ನ ಕನಕ, ಮನೋಹರ ಮೈಸೆ, ಯುವರಾಜ ಭೆಂಡೆ ಮುಂತಾದವರು ಮೆರವಣಿಗೆಯಲ್ಲಿ ಭಾಗವಹಸಿದ್ದರು.


No comments:

Post a Comment